ಏರನ್: ಬೈಬಲಿನಂತೆ ಯಹೂದ್ಯ ಯಾಜಕ ಸಂಘದ ಮೊದಲ ಯಜಮಾನ ಅಥವಾ ಅಧ್ಯಕ್ಷ. ಮೋಸೆಸನ ಸಹೋದರ. ಮೋಸೆಸನೊಡನೆ ಇಸ್ರೇಲಿಗಳನ್ನು ಈಜಿಪ್ಟಿಗೆ ಕರೆದೊಯ್ದನಲ್ಲದೆ ಅವನೊಡನೆ ರೆಫಿಡಿಮ್ ಯುದ್ಧದಲ್ಲಿ ಭಾಗವಹಿಸಿದ. ಅವನ ಪರವಾಗಿ ಈಜಿಪ್ಟಿನಲ್ಲಿ ಧರ್ಮಪ್ರಚಾರ ಮಾಡಿದ. ಸುವರ್ಣ ಕರುವನ್ನು ರಚಿಸಿ ಅದರ ಆರಾಧನೆಯನ್ನು ಪ್ರಾರಂಭಿಸಿದ. ಪರದೇಶದವಳೊಬ್ಬಳನ್ನು ಮೋಸೆಸ್ ಮದುವೆಯಾದಾಗ ಏರನ್ ಮತ್ತು ಅವನ ಸೋದರಿ ಮಿರಿಯಮ್ ಇಬ್ಬರೂ ಅದನ್ನು ತೀವ್ರವಾಗಿ ವಿರೋಧಿಸಿದರು. 				 (ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ